ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ  |  ಸರ್ವೇ ಜನಾಃ ಸುಖಿನೋ ಭವಂತು
Sri Kanaka Guru Peeta Logo
ಶ್ರೀಕನಕಗುರುಪೀಠ Śrī Kānakagurupīṭha

ದೇಣಿಗೆ

ನಮ್ಮ ಮಠಕ್ಕೆ ನಮ್ಮ ಕುಟುಂಬದ ದೇಣಿಗೆ

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ, ಶ್ರೀಕ್ಷೇತ್ರ ಕಾಗಿನೆಲೆ

ವಿಶ್ವಮಾನವ, ದಾಸಶ್ರೇಷ್ಠ ಶ್ರೀ ಕನಕದಾಸರು ಶೋಷಿತರ ಧ್ವನಿಯಾಗಿ, ಸಕಲ ಅಪಮಾನ-ಅವಮಾನಗಳನ್ನು ಸಹಿಸಿ, ಸನ್ಮಾನಗಳನ್ನು ಸ್ವೀಕರಿಸಿ ಸಮಾಜಕ್ಕೆ ಬೆಳಕಾದ ಮಹಾನ್ ಚೇತನ. ಅವರ ಐಕ್ಯಸ್ಥಳದಲ್ಲಿ ಸ್ಥಾಪನೆಯಾದ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠವು ಶ್ರೀ ಕನಕದಾಸರ ಆಶಯಗಳ ಹಾದಿಯಲ್ಲಿಯೇ ಮುನ್ನಡೆಯುತ್ತಿದೆ.

ಪ್ರಥಮ ಪೀಠಾಧ್ಯಕ್ಷರಾದ ಬ್ರಹ್ಮಲೀನ ಜಗದ್ಗುರು ಶ್ರೀ ಶ್ರೀ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಂತೆ, ಪ್ರಸ್ತುತ ಪೀಠಾಧ್ಯಕ್ಷರಾದ ತ್ರಿವಿಧ ದಾಸೋಹಿ, ದಣಿವರಿಯದ ಕಾಯಕಯೋಗಿ ಜಗದ್ಗುರು ಡಾ. ನಿರಂಜನಾನಂದಪುರಿ ಮಹಾಸ್ವಾಮೀಜಿಯವರು ಸಮಾಜವನ್ನು ಮುನ್ನಡೆಸುತ್ತಿದ್ದಾರೆ. ಭಕ್ತರ ಭಕ್ತಿಯ ದೇಣಿಗೆ ಹಾಗೂ ಸರ್ಕಾರಗಳ ಅನುದಾನದೊಂದಿಗೆ ಶ್ರೀಕ್ಷೇತ್ರ ಕಾಗಿನೆಲೆ, ಶಾಖಾಮಠ ಬೆಳ್ಳೂಡಿ, ಶಾಖಾಮಠ ಶ್ರೀಕ್ಷೇತ್ರ ಮೈಲಾರ, ಶಾಖಾಮಠ ಕೇತೋಹಳ್ಳಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು ₹200 ಕೋಟಿಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಕುರುಬ ಸಮುದಾಯದ ಶಾಶ್ವತ ಆಸ್ತಿಗಳನ್ನಾಗಿ ನಿರ್ಮಿಸಿದ್ದಾರೆ.

ವಿಶೇಷ ಸಂಕಲ್ಪ ಅಭಿಯಾನ

“ದಿನಕ್ಕೆ 1 ರೂಪಾಯಿ – ವರ್ಷಕ್ಕೆ ₹365”
(ಶ್ರೀ ಕನಕರ ಹುಂಡಿ ಅಭಿಯಾನ)

ಪ್ರತಿವರ್ಷ ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ನಡೆಯುವ ವಿಶ್ವಮಾನವ ಶ್ರೀ ಕನಕದಾಸರ ಜಯಂತೋತ್ಸವದಿಂದ ಮುಂದಿನ ಜಯಂತೋತ್ಸವದವರೆಗೆ (1 ವರ್ಷ), ಪ್ರತಿ ಕುಟುಂಬವೂ “ದಿನಕ್ಕೆ 1 ರೂಪಾಯಿಯಂತೆ ವರ್ಷಕ್ಕೆ ₹365-00 (ಮುನ್ನೂರ ಅರವತ್ತೈದು ರೂಪಾಯಿ)” ಗಳನ್ನು ‘ಶ್ರೀ ಕನಕರ ಹುಂಡಿ’ಗೆ ಸಮರ್ಪಿಸುವ ವಿನೂತನ ಸಂಕಲ್ಪ ಇದಾಗಿದೆ.

✨ ಭಾವನಾತ್ಮಕ ಸಂಬಂಧ:

“ನಮ್ಮ ಮಠಕ್ಕೆ ನಮ್ಮ ಕುಟುಂಬದ ದೇಣಿಗೆ” ಎಂಬ ಪರಿಕಲ್ಪನೆಯಡಿ ಪ್ರತಿನಿತ್ಯವೂ ಶ್ರೀಮಠದೊಂದಿಗೆ ಮಾನಸಿಕ ಹಾಗೂ ಭಾವನಾತ್ಮಕ ನಂಟು ಬೆಸೆಯುತ್ತದೆ.

🏛️ ಅಭಿವೃದ್ಧಿಗೆ ಬಲ:

ಭಕ್ತರು ನೀಡುವ ಈ ಕಿರು ಕಾಣಿಕೆಯು ಶ್ರೀಮಠದ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡಲು ಸಹಕಾರಿಯಾಗುತ್ತದೆ.

ದೇಣಿಗೆ ಸಲ್ಲಿಸುವ ವಿಧಾನ

ಸಮುದಾಯದ ಬಂಧುಗಳು ಹಾಗೂ ಭಕ್ತಾದಿಗಳು ಈ ಕೆಳಗಿನ ಯಾವುದೇ ವಿಧಾನದ ಮೂಲಕ ತಮ್ಮ ಕುಟುಂಬದ ದೇಣಿಗೆಯನ್ನು ಸುಲಭವಾಗಿ ಸಲ್ಲಿಸಬಹುದು:

1. ಯುಪಿಐ / ಕ್ಯೂ.ಆರ್. ಕೋಡ್ (QR Code) ಮೂಲಕ

ಕೆಳಗೆ ನೀಡಿರುವ ಅಧಿಕೃತ ಕ್ಯೂ.ಆರ್. ಕೋಡ್ ಅನ್ನು Google Pay, PhonePe, Paytm ಅಥವಾ ಯಾವುದೇ UPI ಆ್ಯಪ್ ಮೂಲಕ ಸ್ಕ್ಯಾನ್ ಮಾಡಿ ₹365-00 (ಅಥವಾ ಹೆಚ್ಚಿನ ಮೊತ್ತ) ಪಾವತಿಸಬಹುದು:

ಶ್ರೀ ಕನಕರ ಹುಂಡಿ QR Code
UPI ID: 17077570829kagb@cnrb
2. ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ (Bank Transfer)

ಶ್ರೀಮಠದ ಅಧಿಕೃತ ಬ್ಯಾಂಕ್ ಖಾತೆಗೆ ನೇರವಾಗಿ NEFT, RTGS ಅಥವಾ IMPS ಮೂಲಕ ವರ್ಗಾವಣೆ ಮಾಡಲು ವಿವರಗಳು:

ಬ್ಯಾಂಕ್ ಹೆಸರು:
Karnataka Grameen Bank
ಖಾತೆಯ ಹೆಸರು (Account Name):
PRESIDENT, SRI KAGINELE MAHASAMSTANA KANAKA GURUPEETA, KAGINELE
ಖಾತೆ ಸಂಖ್ಯೆ (Account No.):
17077570829
IFSC ಕೋಡ್:
PKGB0013141

🧾 ದೇಣಿಗೆ ರಸೀದಿ ಪಡೆಯುವುದು ಹೇಗೆ?

  1. ದೇಣಿಗೆ ಪಾವತಿಸಿದ ನಂತರ, ಪಾವತಿಯ ಯಶಸ್ವಿ ಸ್ಕ್ರೀನ್‌ಶಾಟ್ (Screenshot) ತೆಗೆದುಕೊಳ್ಳಿ.
  2. ಆ ಸ್ಕ್ರೀನ್‌ಶಾಟ್ ಜೊತೆಗೆ ನಿಮ್ಮ ಹೆಸರು ಮತ್ತು ಊರಿನ ವಿವರವನ್ನು ವಾಟ್ಸಪ್ ಸಂಖ್ಯೆ: 9741566868 ಗೆ ಕಳುಹಿಸಿ.
  3. ನಿಮ್ಮ ಭಕ್ತಿಯ ಕಾಣಿಕೆಗೆ ಪ್ರತಿಯಾಗಿ ಶ್ರೀಮಠದಿಂದ ಅಧಿಕೃತ ರಸೀದಿಯನ್ನು (Receipt) ನಿಮ್ಮ ವಾಟ್ಸಪ್‌ಗೆ ಕಳುಹಿಸಲಾಗುವುದು.
ॐ
Scroll to Top