ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ  |  ಸರ್ವೇ ಜನಾಃ ಸುಖಿನೋ ಭವಂತು
Sri Kanaka Guru Peeta Logo
ಶ್ರೀಕನಕಗುರುಪೀಠ Śrī Kānakagurupīṭha

ಗಡಿಯಾರ ಕೆಟ್ಟರೆ ಸಮಯ ನಿಲ್ಲದು

ಮನುಷ್ಯನ “ಹುಟ್ಟು” ವೇಷ ಹಾಕಿದ  ಪಾತ್ರಧಾರಿ ಮನುಷ್ಯನ  “ಸಾವು”  ವೇಷ ಕಳೆದ  ಪಾತ್ರಧಾರಿ ಈ ಹುಟ್ಟು ಸಾವುಗಳ ಮಧ್ಯೆ  ಮನುಷ್ಯನ ಕಷ್ಟ – ಸುಖಗಳನ್ನು ಆಧರಿಸಿ ಕೆಟ್ಟ ಸಮಯ  ಮತ್ತು ಒಳ್ಳೆಯ ಸಮಯ  ಎಂದು ನಿರ್ಣಯಿಸುತ್ತೇವೆ  ಆಸೆ ಹುಟ್ಟು ಎನಿಸಿದರೆ ನಿರಾಸೆ  ಮರಣ  ಎನಿಸುತ್ತದೆ  ವಾಸ್ತವದಲ್ಲಿ  ಯಾವುದೂ  ಶಾಶ್ವತವಲ್ಲ ಖುಷಿಯಲ್ಲಿದ್ದಾಗ    ಎಚ್ಚರಿಕೆಯ   ಮತ್ತು   ದುಃಖದಲ್ಲಿದ್ದಾಗ   ಸ್ಪೂರ್ತಿದಾಯಕ ನುಡಿಯಾದ  “ಈ ಕ್ಷಣ ಕಳೆದುಹೋಗುತ್ತದೆ” ಎಂಬ ಶ್ರೀಕೃಷ್ಣ ಪರಮಾತ್ಮನ ಉವಾಚ ಸರ್ವಕಾಲಕ್ಕೂ  ಸಮಯದ ಮಹತ್ವವನ್ನು ಸಾರುತ್ತದೆ.

ಮನುಷ್ಯ ತನಗೆ ಕಷ್ಟ, ದುಃಖ ಆದಾಗ  ಜೀವನವೇ ಸರ್ವನಾಶ ಆಯಿತು ಎಂಬAತೆ  ಭ್ರಮಿಸಿಕೊಂಡು    ನಿರುತ್ಸಾಹಿಯಾಗಿ    ಜೀವನವನ್ನು   ವಿಷಮ ಸ್ಥಿತಿಗೆ   ತಾನೇ ತೆಗೆದುಕೊಂಡು   ಹೋಗುತ್ತಾನೆ    ಸುಖದಲ್ಲಿದಾಗ   ಮುಂದಿನದು   ನೆನೆಯದೇ ಮಿತಿಮೀರಿ ಸಂಭ್ರಮಿಸುವುದು ಮನುಷ್ಯನ ಸಹಜ ಗುಣವಾಗಿದೆ  ಸಮಯ  ಮಾತ್ರ  ನಿರಂತರವಾಗಿ ಕಾಲೋಟವವನೂಟವನ್ನು ಉಣಬಡಿಸುತ್ತಿರುತ್ತದೆ. ಹುಟ್ಟುವ  ಮುನ್ನ  ಹೇರುವವರ್ಯಾರು? ಮರಣದ ನಂತರ ಹೋರುವರ್ಯಾರು? ಎಂದು  ತಿಳಿಯದ  ಮನುಷ್ಯ ತನ್ನದೇ ಕಾರುಬಾರಿನಿಂದ  ಸಮಯದೊಂದಿಗೆ ಜೀವನ ನಡೆಸುತ್ತಾ ಒಳಿತು – ಕೆಡುಕುಗಳ  ಕರ್ಮ  ಎಸಗುತ್ತಾನೆ.  ಸಮಸ್ಯೆಗಳು  ಎದುರಾದಾಗ  ಎದೆಗುಂದದೆ  ಎದುರಿಸಬೇಕು ಸಮಯ ಬದಲಾದಂತೆ ಸಮಸ್ಯೆಗಳು ಸರ್ವನಾಶವಾಗುತ್ತವೆ ಹಾಗಾಗಿ  ಸದಾ  ಕ್ರಿಯಾಶೀಲವಾಗಿ  ಸಕಾರಾತ್ಮಕ  ಮನೋಧೋರಣೆಯಿಂದ  ಜೀವಿಸಬೇಕು. ಕೆಲವರ ಕೆಲವನ್ನು  ಮರೆಯುವುದು ಉತ್ತಮ  ಕೆಲವರ  ಕೆಲವನ್ನು  ನೆನೆಯುವುದು ಸರ್ವೋತ್ತಮ.

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ದಿನಾಂಕ :- 26 ಮತ್ತು 27/11/2026 ರಂದು ನಡೆಯಲಿರುವ ಶ್ರೀ ಕನಕ ಜಯಂತ್ಯೋತ್ಸವ ಮತ್ತು ಶ್ರೀ ಕನಕ ರಥೋತ್ಸವದ ನಿಮಿತ್ತ ದಿನಾಂಕ:- 16 ರಿಂದ 26 ರ ವರೆಗೆ ಹಮ್ಮಿಕೊಂಡಿರುವ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವ ಸಲುವಾಗಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರರ ಜೋಳಿಗೆ ಹಿಡಿದು ಸಧ್ಬಾವನ ನಡಿಗೆಯ ಗ್ರಾಮದರ್ಶನ ಕಾರ್ಯಕ್ರಮದಲ್ಲಿ ಪೂಜ್ಯದ್ವಯರು

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ದಿನಾಂಕ :- 26 ಮತ್ತು 27/11/2026 ರಂದು ನಡೆಯಲಿರುವ ಶ್ರೀ ಕನಕ ಜಯಂತ್ಯೋತ್ಸವ ಮತ್ತು ಶ್ರೀ ಕನಕ ರಥೋತ್ಸವದ ನಿಮಿತ್ತ ದಿನಾಂಕ:- 16 ರಿಂದ 26 ರ ವರೆಗೆ ಹಮ್ಮಿಕೊಂಡಿರುವ ಶ್ರೀ ದಾನಮ್ಮದೇವಿಯ ಪುರಾಣ ಕಾರ್ಯಕ್ರಮ

Leave a Comment

Your email address will not be published. Required fields are marked *

ॐ
Scroll to Top