ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ  |  ಸರ್ವೇ ಜನಾಃ ಸುಖಿನೋ ಭವಂತು
Sri Kanaka Guru Peeta Logo
ಶ್ರೀಕನಕಗುರುಪೀಠ Śrī Kānakagurupīṭha

ಶ್ರೀಗಳ ವಚನಾಮೃತ : ಆಚಾರಗಳು ವಿಚಾರಗಳಿಂದ ಕೂಡಿರಬೇಕು

ತೋಟದಯಲ್ಲಾಪುರದಲ್ಲಿ ಸದ್ಭಾವನಾ ನಡಿಗೆ: ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರೀಗಳ ಕರೆ

ಹಾವೇರಿ (ನ. 23): ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ಇದೇ ನವೆಂಬರ್ 26 ಮತ್ತು 27ರಂದು ನಡೆಯಲಿರುವ ಶ್ರೀ ಕನಕ ಜಯಂತ್ಯೋತ್ಸವ ಹಾಗೂ ಶ್ರೀ ಕನಕ ರಥೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ 8ನೇ ದಿನದ ‘ಸದ್ಭಾವನಾ ನಡಿಗೆ’ ಹಾಗೂ ಗ್ರಾಮದರ್ಶನ ಕಾರ್ಯಕ್ರಮವು ಸೋಮವಾರ ಹಾವೇರಿ ತಾಲ್ಲೂಕಿನ ತೋಟದಯಲ್ಲಾಪುರ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ನವೆಂಬರ್ 16ರಿಂದ 26ರವರೆಗೆ ಆಯೋಜಿಸಲಾಗಿರುವ ಈ ಅಭಿಯಾನದ ಅಂಗವಾಗಿ, ಪರಮಪೂಜ್ಯ ಶ್ರೀಗಳು ಜಗದ್ಗುರು ಶ್ರೀ ರೇವಣಸಿದ್ದೇಶ್ವರರ ಜೋಳಿಗೆಯನ್ನು ಹಿಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ ಹಾಗೂ ವಿವಿಧ ಜನಪದ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮಲ್ಲಿರುವ ದುಶ್ಚಟಗಳನ್ನು ಶ್ರೀ ರೇವಣಸಿದ್ದೇಶ್ವರರ ಜೋಳಿಗೆಗೆ ಹಾಕಿ, ವ್ಯಸನಮುಕ್ತರಾಗುವ ಸಂಕಲ್ಪ ತೊಡುವಂತೆ ಶ್ರೀಗಳು ಪ್ರೇರೇಪಿಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪರಮಪೂಜ್ಯರು, “ದುಶ್ಚಟಗಳು ಕೇವಲ ವ್ಯಕ್ತಿಯ ಆರೋಗ್ಯವನ್ನು ಮಾತ್ರ ಹಾಳು ಮಾಡುವುದಿಲ್ಲ, ಬದಲಾಗಿ ಆತನನ್ನು ನಂಬಿಕೊಂಡಿರುವ ಇಡೀ ಕುಟುಂಬವನ್ನೇ ಸಂಕಷ್ಟಕ್ಕೆ ದೂಡುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿದ್ದು, ಸ್ವಸ್ಥ ಹಾಗೂ ನೆಮ್ಮದಿಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು” ಎಂದು ಕರೆ ನೀಡಿದರು. ಇದೇ ವೇಳೆ, ಸಂಜೆ ಕಾಗಿನೆಲೆಯಲ್ಲಿ ನಡೆಯಲಿರುವ ದಾನಮ್ಮದೇವಿಯ ಪ್ರವಚನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಭಕ್ತರಿಗೆ ಆಹ್ವಾನ ನೀಡಿದರು.

​ಗ್ರಾಮದ ಎಲ್ಲಾ ಸಮುದಾಯದ ಮುಖಂಡರು, ಯುವಕರು ಹಾಗೂ ಮಹಿಳೆಯರು ಒಗ್ಗೂಡಿ ಈ ಸದ್ಭಾವನಾ ನಡಿಗೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.

ಆಚಾರಗಳು ವಿಚಾರಗಳಿಂದ ಕೂಡಿರಬೇಕು

ಮನುಷ್ಯ   ತನ್ನ  ಲೌಕಿಕ    ಬದುಕನ್ನು  ಅಲೌಕಿಕ  ವಸ್ತು,   ವಿಷಯಗಳೊಂದಿಗೆ ಸಮ್ಮಿಳಿಸಿಕೊಂಡು  ಧರ್ಮ  ಮತ್ತು ದೇವರುಗಳಂತಹ ವಿಚಾರದಲ್ಲಿ ಆಚಾರಗಳನ್ನು ತಾನೇ  ರೂಪಿಸುವ  ಮೂಲಕ  ಅನುಸರಿಸುತ್ತಾ  ಬೇರೆಯವರಿಗೆ   ಅನುಸರಿಸಲೂ ಧರ್ಮ  ಮತ್ತು  ದೇವರ  ಹೆಸರಲ್ಲಿ ಒತ್ತಡ ಹೇರುತ್ತಿದ್ದಾನೆ. ಕೆಲವೊಮ್ಮೆ ನಂಬಿಕೆ – ಅಪನಂಬಿಕೆಯಾಗಿ,  ಅಪನಂಬಿಕೆ  –  ಮೂಡನಂಬಿಕೆಯಾಗಿ   ಪರಿವರ್ತನೆಯಾಗಿ  ತನ್ನತನವನ್ನು  ಹಾಳುಮಾಡಿಕೊಳ್ಳುವದಷ್ಟೇ  ಅಲ್ಲದೇ   ಸಮಾಜದ   ಸ್ವಾಸ್ಥ್ಯವನ್ನು  ಹಾಳುಮಾಡಿಕೊಳ್ಳುತ್ತಿರುವುದು  ಆತಂಕಕಾರಿ    ಬೆಳವಣಿಗೆಯಾಗಿದೆ.   ಹಿರಿಯರು  ಮಾಡಿರುವ   ಹಲವು   ಆಚರಣೆಗಳ  ಹಿಂದೆ    ವೈಜ್ಞಾನಿಕ      ಕಾರಣಗಳಿವೆ  ದುರಾದೃಷ್ಟವಶಾತ್  ನಾವಿಂದು   ಅವುಗಳನ್ನು     ಸ್ವಹಿತಕ್ಕಾಗಿ     ಮಾರ್ಪಾಡು  ಮಾಡಿಕೊಂಡು    ಪರಪೀಡಕರಾಗಿ  ಸಮಾಜದಲ್ಲಿ  ಮಡಿ,  ಮೈಲಿಗೆ, ತಾರತಮ್ಯ, ಮುಂತಾದ ರೀತಿಯ ಅನಾಚಾರದ   ಆಚರಣೆಗಳು ಇನ್ನೂ  ಜೀವಂತಯಿರುವುದು ಮನುಷ್ಯಧರ್ಮ ಬೋಧಿಸುವವರಿಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಧರ್ಮ ಮತ್ತು ದೇವರ  ಅನುಗ್ರಹಕ್ಕೆ  ಶ್ಲೋಕಗಳು,  ಮಂತ್ರಗಳು, ಹಾಡು,  ಭಜನೆ, ಮಡಿ, ಪೂಜೆ, ನೈವೇದ್ಯ,   ಆರತಿ,  ಸೇವೆ   ಮುಂತಾದವುಗಳನ್ನು    ನಾವುಗಳು    ಮನಸ್ಸನ್ನು ದೃಢಗೊಳಿಸಲು   ಮತ್ತು   ಏಕಾಗ್ರತೆಗೊಳಿಸಲು  ಕೈಗೊಳ್ಳುವ ಕಾರ್ಯ ಚಟುವಟಿಕೆಗಳಾಗಿವೆ.  ಇವುಗಳ  ನೆಪದಲ್ಲಿ   ಆರ್ಥಿಕವಾಗಿ,   ಸಾಮಾಜಿಕವಾಗಿ,  ನೈತಿಕವಾಗಿ  ಶೋಷಣೆಗೆ  ಒಳಗಾಗಬಾರದು   ಇಂತಹ    ಆಚರಣೆಗಳಲ್ಲಿ   ಇರುವ    ನಿಜ ವಿಚಾರಗಳೊಂದಿಗೆ   ನಮ್ಮ  ಭಕ್ತಿ   ಇರಬೇಕು. ಯಾವುದೇ ವ್ಯಕ್ತಿಯು ಸಾಮಾಜಿಕ ಸಂಬAಧಗಳ ಜೊತೆ  ಇರುವ  ಸನ್ನಡತೆ  ಮತ್ತು  ಹಿತನುಡಿಗಳೇ  ಧರ್ಮ ಮತ್ತು ದೇವರ  ಆಚರಣೆಗಳಾಗಬೇಕು.  ಇಂತಹ   ಆಚರಣೆಗಳಲ್ಲಿ   ವಿಚಾರಗಳಿರಬೇಕು. ಅನಾಚಾರಗಳಿರಬಾರದು  ಇದನ್ನೇ   `ಆಚಾರವೇ  ಸ್ವರ್ಗ  ಅನಾಚಾರವೇ  ನರಕ’ ಎಂದಿರುವುದು.

Leave a Comment

Your email address will not be published. Required fields are marked *

ॐ
Scroll to Top