ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ  |  ಸರ್ವೇ ಜನಾಃ ಸುಖಿನೋ ಭವಂತು
Sri Kanaka Guru Peeta Logo
ಶ್ರೀಕನಕಗುರುಪೀಠ Śrī Kānakagurupīṭha

ವಚನಾಮೃತ : ಭಯದ ಭಕ್ತಿಗಿಂತ ನಿರ್ಭಯದ ನಿಷ್ಠೆಯಿರಲಿ…

ಹುಟ್ಟಿದ ಮನುಷ್ಯ ಸಾಯುವವರೆಗೂ ವಸ್ತು ಮತ್ತು ವಿಷಯಗಳ ಪರಾವಲಂಬಿಯಾಗಿ   ಬದುಕುತ್ತಿರುತ್ತಾನೆ.  ದೈವ,  ಗುರು,  ಕಾಯಕಗಳ  ಮೂಲಕ  ತನ್ನ ಅಪೇಕ್ಷೆಗಳನ್ನು ಸಕಾರಗೊಳಿಸಿಕೊಳ್ಳಲು  ಕೆಲವರ  ಭಕ್ತಿಯು  ತಮ್ಮ  ಮನದಾಳದ  ತೊಳಲಾಟ –  ನೋವುಗಳ ನಿವಾರಣೆಗಾಗಿ,  ಕೆಲವರ ಭಕ್ತಿಯು ಧನ-ಕನಕ ಸಂಪತ್ತು ಅಧಿಕಾರಗಳ ಗಳಿಕೆಗಾಗಿ, ಕೆಲವರ ಭಕ್ತಿಯು ಜೀವನದ  ಸೈದ್ಧಾಂತಿಕ ಗುರಿ  ಸಾಧನೆಗಾಗಿ, ಕೆಲವರ ಭಕ್ತಿಯು  ಸರ್ವರಲ್ಲೂ, ಸರ್ವ ವಸ್ತುಗಳಲ್ಲಿ ಸಾಕ್ಷಾತ್ ಭಗವಂತ ಮತ್ತು ಗುರುವನ್ನು ಕಾಣುತ್ತಾ ಸನ್ಮಮಂಗಳ ಬಯಸುವುದಾಗಿರುತ್ತದೆ.

ಭಕ್ತಿಯೂ ಯಾವಾಗಲೂ ಭಯ ಮತ್ತು ದುರಾಸೆಯನ್ನು ನಾಶಮಾಡಿ ಸರ್ವದರಲ್ಲೂ ಪ್ರೀತಿ   ಮತ್ತು   ತ್ಯಾಗ   ಹೊಂದುವುದಾಗಿದೆ.  ಯಾವುದರಲ್ಲಿ  ನಿರ್ಭೀತಿಯಿಂದ ಗಾಢವಾದ  ವಿಶ್ವಾಸವಿರುವುದೋ  ಅದು ನಿಷ್ಠೆ ಎನಿಸುತ್ತದೆ.  ದೈವ, ಗುರು  ಮತ್ತು ಕಾಯಕದ  ಮೇಲೆ  ಭಕ್ತಿಯು  ಭಯದಿಂದ  ಬಂದಿದ್ದರೆ  ಅದು  ಕ್ಷಣಿಕವಾದುದ್ದು ನಿಷ್ಠೆಯಿಂದ ಬಂದಿದ್ದರೆ  ಅದು  ಶಾಶ್ವತವಾದುದ್ದು. ಯಾವುದೇ  ಭಕ್ತಿಯು ನಮ್ಮನ್ನು ಕಾಯಬೇಕೇ  ಹೊರತು  ಕೊಲ್ಲಬಾರದು.  ರಾವಣ, ಹಿರಣ್ಯಕಶಿಪು  ಮುಂತಾದವರ ಭಯದ  ಭಕ್ತಿ   ಕ್ಷಣಿಕವಾಯಿತು ಶ್ರೀಭಕ್ತ ಪ್ರಹ್ಲಾದ,  ಶ್ರೀಭಕ್ತ ಕನಕದಾಸರು, ಶ್ರೀಭಕ್ತ ಮಾರ್ಕಾಂಡೇಶ್ವರರ ಭಕ್ತಿ ಚಿರಸ್ಥಾಯಿಯಾಯಿತು

ಮನುಷ್ಯ ತೋರಿಕೆಗೆ, ಆಡಂಬರಕ್ಕೆ, ಮೆಚ್ಚುಗೆಗೆ, ಆಮಿಷಕ್ಕೆ ಭಯದ ಭಕ್ತಿ ಹೊಂದದೆ ಆತ್ಮ  ಸಾಕ್ಷತ್ಕಾರಕ್ಕಾಗಿ   ನಿರ್ಭಯದ  ನಿಷ್ಠೆ  ಹೊಂದಬೇಕು. ಅನುಭವಕ್ಕಾಗಿ  ಭಕ್ತಿ ತೋರಬಾರದು ಆತ್ಮಾನಂದಕ್ಕಾಗಿ ಭಕ್ತಿನಿಷ್ಠೆಯಿರಬೇಕು.

ಒಂಭತ್ತನೆಯ ದಿನದ ಸಧ್ಬಾವನ ನಡಿಗೆ

ಕನಕಗುರುಪೀಠ ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ದಿನಾಂಕ :- 26 ಮತ್ತು 27/11/2026 ರಂದು ನಡೆಯಲಿರುವ ಶ್ರೀ ಕನಕ ಜಯಂತ್ಯೋತ್ಸವ ಮತ್ತು ಶ್ರೀ ಕನಕ ರಥೋತ್ಸವದ ನಿಮಿತ್ತ ದಿನಾಂಕ:- 16 ರಿಂದ 26 ರ ವರೆಗೆ ಹಮ್ಮಿಕೊಂಡಿರುವ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವ ಸಲುವಾಗಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರರ ಜೋಳಿಗೆ ಹಿಡಿದು ಸಧ್ಬಾವನ ನಡಿಗೆಯ ಗ್ರಾಮದರ್ಶನ ಕಾರ್ಯಕ್ರಮದಲ್ಲಿ ಪೂಜ್ಯದ್ವಯರು

ದಿನಾಂಕ :- 24/11/2026
ಸ್ಥಳ:- ಬೆನಕನಹಳ್ಳಿ, ಹಾವೇರಿ

ಹತ್ತನೆಯ ದಿನದ ಸಧ್ಬಾವನ ನಡಿಗೆ

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ದಿನಾಂಕ :- 26 ಮತ್ತು 27/11/2026 ರಂದು ನಡೆಯಲಿರುವ ಶ್ರೀ ಕನಕ ಜಯಂತ್ಯೋತ್ಸವ ಮತ್ತು ಶ್ರೀ ಕನಕ ರಥೋತ್ಸವದ ನಿಮಿತ್ತ ದಿನಾಂಕ:- 16 ರಿಂದ 26 ರ ವರೆಗೆ ಹಮ್ಮಿಕೊಂಡಿರುವ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವ ಸಲುವಾಗಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರರ ಜೋಳಿಗೆ ಹಿಡಿದು ಸಧ್ಬಾವನ ನಡಿಗೆಯ ಗ್ರಾಮದರ್ಶನ ಕಾರ್ಯಕ್ರಮದಲ್ಲಿ ಪೂಜ್ಯದ್ವಯರು

ದಿನಾಂಕ :- 25/11/2026
ಸ್ಥಳ:- ಯತ್ತಿನಹಳ್ಳಿ, ಹಾವೇರಿ

Leave a Comment

Your email address will not be published. Required fields are marked *

ॐ
Scroll to Top