ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ  |  ಸರ್ವೇ ಜನಾಃ ಸುಖಿನೋ ಭವಂತು
Sri Kanaka Guru Peeta Logo
ಶ್ರೀಕನಕಗುರುಪೀಠ Śrī Kānakagurupīṭha

ನುಡಿಗೆ ಬಣ್ಣ ಹಚ್ಚಿ ಮೆಚ್ಚಿಸುವ ಹುಚ್ಚುತನ ಬೇಡ

“ನೀತಿಯ ನೆಲೆಗಟ್ಟಿಲ್ಲದ  ವಾದವು  ಮಾತಿನ  ವ್ಯಭಿಚಾರ” ಎಂಬ ಮಾತು ಅಕ್ಷರಶಃ  ಸತ್ಯ ಅಶಾಶ್ವತ ಬದುಕಿನಲ್ಲಿ ಏನನ್ನೂ ಹೊತ್ತುಕೊಂಡು ನಾವುಗಳು  ಹೋಗುವುದಿಲ್ಲ ನಮ್ಮ ನಡೆ – ನುಡಿಗಳು ಮತ್ತು ನಾವು  ಮಾಡಿದ  ಕೆಲಸಗಳು  ನಮ್ಮನ್ನು  ಕುರಿತು ಮಾತನಾಡುವಂತಿರಬೇಕೇ ಹೊರತು ಮಾತಾನಾಡುವುದನ್ನೇ  ಕಾಯಕವಾಗಿಸಿಕೊಳ್ಳಬಾರದು  ಮನುಷ್ಯ  ಜೀವನದ   ಹರುಷ  ನಮ್ಮ  ಬದುಕಿನ   ಶೈಲಿಯ  ಮೇಲೆಅವಲಂಬಿಸಿರುತ್ತದೆಯೇ  ಹೊರತು   ನಮ್ಮ   ಮಾತುಗಳ   ಮೇಲಲ್ಲ    ನಾವುಒಳ್ಳೆಯವರೆಂಬುದನ್ನು ಸಾಬೀತು ಪಡಿಸುವ  ಸಲುವಾಗಿ  ಗೌರವ  ಸ್ಥಾನಮಾನಕ್ಕಾಗಿ ತಮ್ಮನ್ನು ತಾವು ಹೊಗಳಿಕೊಳ್ಳುವ ಬರದಲ್ಲಿ ಬೇರೆಯವರ ಮೇಲೆ ದೋಷಾರೋಪಗಳನ್ನು ಮಾಡುವ  ನಮ್ಮಗಳ  ಪ್ರವೃತ್ತಿಯು  ಬದುಕಿನ ಸಂತೆಯಲಿ ನಮ್ಮನ್ನು ನಾವು ಹರಾಜಿಗಿಟ್ಟಂತೆ ಎಂಬುದನ್ನ  ಮರೆತು  ನಮ್ಮ  ವ್ಯಕ್ತಿತ್ವವನ್ನು  ಕಳೆದುಕೊಳ್ಳುತ್ತೇನೆಂಬಸಾಮಾನ್ಯ  ತಿಳುವಳಿಕೆ  ಮತ್ತು  ಸ್ವಂತತೆಯಿಲ್ಲದೆ ಗುಂಪಿನಲ್ಲಿ ಗೋವಿಂದ ಎನ್ನುತಾ ಪರನಿಂದೆ ಮಾಡುವ  ಮನಸ್ಥಿತಿಯಿಂದ  ನಾವುಗಳು ಹೊರಬರಬೇಕು  ಕೆಲವರದು ನುಡಿಗೆ ಬಣ್ಣ  ಹಚ್ಚಿ  ಪರರನ್ನು  ಮೆಚ್ಚಿಸುವ  ಹುಚ್ಚುತನವೇ  ಕಾಯಕವಾಗಿರುತ್ತದೆ.  ಸದಾ ಸತ್ಕಾರ್ಯ ಮಾಡುವವನು  ಯಾವಾಗಲೂ  ತನ್ನ ಮುಂದಿನ ಸತ್ಕಾರ್ಯಗಳ ಬಗ್ಗೆ  ಆಲೋಚಿಸುತ್ತಿರುತ್ತಾನೆಯೇ   ಹೊರತು    ಬೇರೆಯವರ   ಕಾರ್ಯಗಳನ್ನ ಆರೋಪಿಸುವುದನ್ನಾಗಲಿ  ವಿರೂಪಗೊಳಿಸುವುದನ್ನಾಗಲಿ  ಮಾಡುವುದಿಲ್ಲ   ನಮ್ಮ ಮಾತುಗಳು   ವಿರಸಕ್ಕೆ     ಕಾರಣವಾಗದೆ     ಸಮರಸಕ್ಕೆ    ಕಾರಣವಾಗುತ್ತಾ ಸೌಹಾರ್ದತೆಯನ್ನು ಬೆಳೆಸಬೇಕು

ಏಳನೇಯ ದಿನದ ಸಧ್ಬಾವನ ನಡಿಗೆ

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ದಿನಾಂಕ :- 26 ಮತ್ತು 27/11/2026 ರಂದು ನಡೆಯಲಿರುವ ಶ್ರೀ ಕನಕ ಜಯಂತ್ಯೋತ್ಸವ ಮತ್ತು ಶ್ರೀ ಕನಕ ರಥೋತ್ಸವದ ನಿಮಿತ್ತ ದಿನಾಂಕ:- 16 ರಿಂದ 26 ರ ವರೆಗೆ ಹಮ್ಮಿಕೊಂಡಿರುವ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವ ಸಲುವಾಗಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರರ ಜೋಳಿಗೆ ಹಿಡಿದು ಸಧ್ಬಾವನ ನಡಿಗೆಯ ಗ್ರಾಮದರ್ಶನ ಕಾರ್ಯಕ್ರಮದಲ್ಲಿ ಪೂಜ್ಯದ್ವಯರು

ದಿನಾಂಕ :- 22/11/2026
ಸ್ಥಳ:- ಕಳ್ಳಿಹಾಳ, ಹಾವೇರಿ(ತಾ)

Leave a Comment

Your email address will not be published. Required fields are marked *

ॐ
Scroll to Top